ಸೌಕರ್ಯ ದಾಸ
ಸುರಚಿತ ವಿಚಿತ್ರ ಸ೦ತೆ ಇದು,ಬಣ್ಣ ಬಣ್ಣದ ಮಾತುಗಳಿವೆ,
ಬಣ್ಣಿಸಲು ಜನರ ಕಲ್ಪನೆಗಳಿವೆ,
ತಾನಗಿ ಕುರಿ ಬ೦ದು ಕತ್ತನ್ನು ನೀಡುತಿದೆ,
ಗತ್ತಿನಾ ಮಾತಲ್ಲ ಗಮ್ಮತ್ತು ಬಹಳ ಇದೆ.
ತನ್ನನ್ನು ತೊರೆದು ತಾ ಹುಡುಕುವಾ ಜನರು,
ನಾನಿಲ್ಲ ನೀನಿಲ್ಲ ಎಲ್ಲ ಅವನ ಮಧದಂತೆ,
ಭಗವ೦ತನಲ್ಲನವ ದಾನಿಯೂ ಅಲ್ಲ,
ಸ್ವಕಾರ್ಯದಿ೦ದ ತಾ ಸ್ವಾಮಿಯಾಗಿಹನು,
ಸೌಕರ್ಯ ದಾಸರಾದ ನಾವು ಇನ್ನೇನ ಮಾಡಬಲ್ಲೆವು.


0 Comments:
Post a Comment
<< Home