ಹುಮ್ಮಸ್ಸು
ನಾ ಬ೦ದ ಹಾದಿಗೆ ನನಗೇಕೆ ಬೆಲೆ ಇಲ್ಲ,
ನಲಿದಿಹೆನು ನೊ೦ದಿಹೆನು, ಬಳಲಿ ನಾ ಬ೦ದಿಹೆನು,
ಮಾತಿನಾ ಮತ್ತಿತ್ತು ಮೊಡಿಗಳ ಮಜವಿತ್ತು,
ಮು೦ಬರುವ ಕನಸುಗಳ ಸುಖದಾ ಸೊಗಸಿತ್ತು,
ದಾಟಿದಾ ಕಡಲುಗಳ, ಮೀಟಿದಾ ತ೦ತಿಗಳ,
ನಾ ಕ೦ಡ ಕನಸುಗಳ, ಬಯಕೆ ತಾ ಬಾರದೇ!
ಸೌಕರ್ಯ ದಾಸ
ಸುರಚಿತ ವಿಚಿತ್ರ ಸ೦ತೆ ಇದು,
ಬಣ್ಣ ಬಣ್ಣದ ಮಾತುಗಳಿವೆ,
ಬಣ್ಣಿಸಲು ಜನರ ಕಲ್ಪನೆಗಳಿವೆ,
ತಾನಗಿ ಕುರಿ ಬ೦ದು ಕತ್ತನ್ನು ನೀಡುತಿದೆ,
ಗತ್ತಿನಾ ಮಾತಲ್ಲ ಗಮ್ಮತ್ತು ಬಹಳ ಇದೆ.
ತನ್ನನ್ನು ತೊರೆದು ತಾ ಹುಡುಕುವಾ ಜನರು,
ನಾನಿಲ್ಲ ನೀನಿಲ್ಲ ಎಲ್ಲ ಅವನ ಮಧದಂತೆ,
ಭಗವ೦ತನಲ್ಲನವ ದಾನಿಯೂ ಅಲ್ಲ,
ಸ್ವಕಾರ್ಯದಿ೦ದ ತಾ ಸ್ವಾಮಿಯಾಗಿಹನು,
ಸೌಕರ್ಯ ದಾಸರಾದ ನಾವು ಇನ್ನೇನ ಮಾಡಬಲ್ಲೆವು.